Science

ಜಗದೀಶ್ಚಂದ್ರ ಬೋಸ್ ಬರೆದ ಪತ್ರ

ಭಾರತದ ಪ್ರಖ‍್ಯಾತ ವಿಜ್ಞಾನಿ, ಸರ್ ಜಗದೀಶ್ಚಂದ್ರ ಬೋಸ್‌ರವರು 1901ನೇ ಇಸವಿಯಲ್ಲಿ ಇಂಗ್ಲೆಂಡ್ ದೇಶದ ಲಂಡನ್‍ನಲ್ಲಿದ್ದಾಗ, ತಮ್ಮ ಸ್ನೇಹಿತ ಶ್ರೀ ರವೀಂದ್ರನಾಥ ಠಾಗೋರರಿಗೆ ಒಂದು ಪತ್ರ ಬರೆಯುತ್ತಾರೆ. ಆ ಪತ್ರದಲ್ಲಿ ಈ ಸಾಲುಗಳಿದ್ದವು…“ಈ ಲಕ್ಷಾಧಿಪತಿಯೊಬ್ಬನು ಇನ್ನಷ್ಟೂ ಲಾಭ ಪಡೆಯುವ ಆಸೆಯಿಂದ ನನ್ನ ಬಳಿ ಭಿಕ್ಷುಕನಂತೆ ಬಂದಿದ್ದಾನೆ. ಗೆಳೆಯಾ, ಈ ದೇಶದಲ್ಲಿ ಹಣದ ಬಗೆಗಿರುವ ಹಾತೊರೆತ ಮತ್ತು ದುರಾಸೆಯನ್ನು ನೀವೂ ನೋಡಿರುತ್ತೀರಿ- ಹಣ, ಹಣ – ಎಲ್ಲೆಡೆ ಹರಡಿರುವ ಅತಿಯಾದ ದುರಾಸೆ! ನಾನೇನಾದರು ಈ ಭಯಾನಕ ಜಾಲದಲ್ಲಿ ಸಿಕ್ಕಿಬಿದ್ದರೆ, ಪಾರಾಗಲು …

ಜಗದೀಶ್ಚಂದ್ರ ಬೋಸ್ ಬರೆದ ಪತ್ರ Read More »

ಲೆಬನೀಸ್ ರಾಕೆಟ್ ಸೊಸೈಟಿ

ಲೆಬನಾನ್ ಮಧ್ಯ ಪ್ರಾಚ್ಯದಲ್ಲಿರುವ ಒಂದು ಪುಟ್ಟ ದೇಶ. ಆಂತರಿಕ ಯುದ್ಧ, ರಾಜಕೀಯ ಅಸ್ಥಿರತೆ ಮತ್ತು ಇತರ ಕಾರಣಗಳಿಂದಾಗಿ ಆಗಾಗ  ಅಶಾಂತಿ, ಗೊಂದಲವನ್ನು ಎದುರಿಸಿಕೊಂಡು ಬಂದಿರುವ ದೇಶ. ಅಂತಹ ಪರಿಸ್ಥಿತಿಯಿದ್ದರೂ ಅರವತ್ತರ ದಶಕದಲ್ಲಿ, ಲೆಬನಾನ್ ದೇಶವು ಬಾಹ್ಯಾಕಾಶಕ್ಕೆ ರಾಕೆಟ್‌ಗಳನ್ನು ಕಳಿಸಲು ಪ್ರಾರಂಭಿಸಿತ್ತು. ಆ ಬಾಹ್ಯಾಕಾಶ ಯೋಜನೆಯನ್ನು ಪ್ರಾರಂಭಿಸಿದ್ದು ಒಬ್ಬ ಕಾಲೇಜು ಉಪನ್ಯಾಸಕ ಎನ್ನುವುದು ಆಶ್ಚರ್ಯದ ವಿಷಯ. ಆ ಉಪನ್ಯಾಸಕರ ಹೆಸರು ಮನೂಗ್ ಮನೂಗಿಯನ್. ಮನೂಗ್ ಮನೂಗಿಯನ್ಮನೂಗ್ ಮನೂಗಿಯನ್ ಹುಟ್ಟಿದ್ದು ಜೆರುಸಲೆಮ್‌ನಲ್ಲಿ. ಶಾಲಾ ವಿದ್ಯಾಭ್ಯಾಸ ಅಲ್ಲೇ ಮುಗಿಸಿದ್ದರು. ಅಮೆರಿಕಾದ ಟೆಕ್ಸಾಸ್ …

ಲೆಬನೀಸ್ ರಾಕೆಟ್ ಸೊಸೈಟಿ Read More »

ಲಸಿಕೆ ವಿರೋಧಿ ನಂಬಿಕೆಗಳು

ಕೊರೊನಾ ಪಿಡುಗಿನ ಈ ಕಾಲದಲ್ಲಿ, ಔಷದೀಯ ಕಂಪೆನಿಗಳು, ರಿಸರ್ಚ್ ಲ್ಯಾಬ್ ಗಳು ಲಸಿಕೆ ಕಂಡುಹಿಡಿಯಲು ಒದ್ದಾಡುತ್ತಿರುವಾಗ, ಲಸಿಕೆಗಳನ್ನು ವಿರೋಧಿಸುವ ಜನರೂ ಇದ್ದಾರೆ ಎಂದರೆ ಆಶ್ಚರ್ಯವಾಗುತ್ತದೆ . ಲಸಿಕೆ ವಿರೋಧಿ ನಂಬಿಕೆಗಳು ಹೊಸತೇನಲ್ಲ, ಮೊದಲ ಲಸಿಕೆ ಅನ್ವೇಷಣೆಯಾದ  ದಿನದಿಂದಲೂ ಇವೆ. ಆದರೆ ಸುಮಾರು ಒಂದೆರಡು ದಶಕಗಳಿಂದ ಲಸಿಕೆಗಳ ಬಗ್ಗೆ ವಿರೋಧ ಹೆಚ್ಚುತ್ತಿದ್ದು, ವಿಶೇಷವಾಗಿ ಎಂಎಂಆರ್ (ದಡಾರ, ಕೆಪ್ಪಟೆ ಮತ್ತು ರುಬೆಲ್ಲಾ ರೋಗಗಳಿಗೆ ನೀಡುವ ಲಸಿಕೆ) ಲಸಿಕೆಯ ಕುರಿತು ಪಾಶ್ಚಾತ್ಯ ದೇಶಗಳಲ್ಲಿ ಅಪನಂಬಿಕೆ ಮತ್ತು ವಿರೋಧ  ಹೆಚ್ಚಾಗಿದೆ. ಮುಂದೆ ಕೊರೊನಾ …

ಲಸಿಕೆ ವಿರೋಧಿ ನಂಬಿಕೆಗಳು Read More »