ಜಗದೀಶ್ಚಂದ್ರ ಬೋಸ್ ಬರೆದ ಪತ್ರ
ಭಾರತದ ಪ್ರಖ್ಯಾತ ವಿಜ್ಞಾನಿ, ಸರ್ ಜಗದೀಶ್ಚಂದ್ರ ಬೋಸ್ರವರು 1901ನೇ ಇಸವಿಯಲ್ಲಿ ಇಂಗ್ಲೆಂಡ್ ದೇಶದ ಲಂಡನ್ನಲ್ಲಿದ್ದಾಗ, ತಮ್ಮ ಸ್ನೇಹಿತ ಶ್ರೀ ರವೀಂದ್ರನಾಥ ಠಾಗೋರರಿಗೆ ಒಂದು ಪತ್ರ ಬರೆಯುತ್ತಾರೆ. ಆ ಪತ್ರದಲ್ಲಿ ಈ ಸಾಲುಗಳಿದ್ದವು…“ಈ ಲಕ್ಷಾಧಿಪತಿಯೊಬ್ಬನು ಇನ್ನಷ್ಟೂ ಲಾಭ ಪಡೆಯುವ ಆಸೆಯಿಂದ ನನ್ನ ಬಳಿ ಭಿಕ್ಷುಕನಂತೆ ಬಂದಿದ್ದಾನೆ. ಗೆಳೆಯಾ, ಈ ದೇಶದಲ್ಲಿ ಹಣದ ಬಗೆಗಿರುವ ಹಾತೊರೆತ ಮತ್ತು ದುರಾಸೆಯನ್ನು ನೀವೂ ನೋಡಿರುತ್ತೀರಿ- ಹಣ, ಹಣ – ಎಲ್ಲೆಡೆ ಹರಡಿರುವ ಅತಿಯಾದ ದುರಾಸೆ! ನಾನೇನಾದರು ಈ ಭಯಾನಕ ಜಾಲದಲ್ಲಿ ಸಿಕ್ಕಿಬಿದ್ದರೆ, ಪಾರಾಗಲು …